Loading
ಸವತಿತಾಯಿ ಮತ್ತೂ ರೇಗಿ ರೇಗಿ ಬೈದು ಬೈದೂ ಹೋಗು ನಾಗಿ, ಮನೆಯ ಒಳಗೆ ಕಾಲು ಇಡಬೇಡೆಂ ದಳು ಪುಟ್ಟ ಹುಡುಗಿ ನಾಗಿ ಕಂಬಳಿ ಕೊಪ್ಪೆ ಹಾಕಿಕೊಂಡು, ಅಳುತ,savatitaayi mattu reggi reggi baidu baiduu haagu naagi, maneya olage kaalu idabedem daLu puTTa huDugi naagi kambali koppe haakikondhu, aLuta
ಸವತಿತಾಯಿ ಮತ್ತೂ ರೇಗಿ ರೇಗಿ ಬೈದು ಬೈದೂ ಹೋಗು ನಾಗಿ, ಮನೆಯ ಒಳಗೆ ಕಾಲು ಇಡಬೇಡೆಂ ದಳು ಪುಟ್ಟ ಹುಡುಗಿ ನಾಗಿ ಕಂಬಳಿ ಕೊಪ್ಪೆ ಹಾಕಿಕೊಂಡು, ಅಳುತ, ತುಂಗೆ ದನವ ಹುಡುಕಲೆಂದು ಕಪ್ಪಿನಲ್ಲಿ ಹೊರಟಳು.
ಹೋಗುತ್ತಿದ್ದ ನಾಗಿಯನ್ನು ನೋಡಿ ನೋಡಿ, ಬೈದುಬೈದು "ಸಾಯಬಾರದೇಕೆ ನಾಗಿ, ನಿನ್ನ ಋಣವು ತೀರಲಿ; ದಾರಿ ಗಡ್ಡ ಮರವು ಬಿದ್ದು, ಹಾವುಗೀವು ಬಂದು ಕಚ್ಚಿ ಮುಗಿಸಬಾರದೇಕೆ ನಿನ್ನ" ಎಂದು ಹರಸುತ್ತಿದ್ದಳು!
ಸವತಿ ತಾಯಿಗಿಂತ ಕಾಡೇ ಲೇಸು ಎಂದು ತಿಳಿದು ನಾಗಿ ತುಂಗೆಯನ್ನು ಅಂಬಾ ಅಂಬಾ ಎಂದು ಕರೆಯುತ ಹೋದಳು; ಎಲ್ಲಿ ಕರೆದರು ತುಂಗೆ ಇಲ್ಲಾ ಕಾಡು ಮರುದನಿ ಬೀರುತಿತ್ತು ಸಂಜೆವೆಣ್ಣಿನ ಕಪ್ಪು ಸೆರಗು ನೆಲವ ಮುಸುಗುತ್ತಿದ್ದಿತು!
ಗದ್ದೆಗಳನು ದಾಟಿ ಹೋದಳು; ಹಳ್ಳವನ್ನು ಹಾದು ಹೋದಳು ಹಗಲಿನಿಂದ ಹೊಟ್ಟೆಗಿಲ್ಲದೆ ತತ್ತರಿಸುತ ಹೋದಳು; ಕಂಡ ಕರಿಯ ಕಲ್ಲು ಪೊದೆಗಳ ತುಂಗೆಯೆಂದು ಭ್ರಮಿಸಿ ಕರೆದು ಕಾಣದೆಲ್ಲಿಯು ತುಂಗೆಯನ್ನು ಬಿಕ್ಕಿ ಬಿಕ್ಕಿ ಅತ್ತಳು.
ಸವತಿತಾಯಿ ಮತ್ತೆ ಕೋಪಗೊಂಡು ಬೈದು, ಮನೆಯೊಳಗೆ ಕಾಲು ಇಡಬೇಡ ಎಂದು ಪುಟ್ಟ ಹುಡುಗಿಯನ್ನು ನಿಂದಿಸುತ್ತಿದ್ದಳು. ಅವಳು ಕಂಬಳಿಯನ್ನು ಹೊದಿಕೊಂಡು ಅಳುತ್ತಾ, ತುಂಗೆಯನ್ನು ಹುಡುಕಲು ಹೊರಟಳು.
ಹೋಗುತ್ತಿದ್ದ ನಾಗಿಯನ್ನು ನೋಡಿ, ಸವತಿತಾಯಿ ಬೈದು, 'ನೀನು ಸಾಯಬಾರದೇ? ನಿನ್ನ ಋಣ ತೀರಲಿ. ದಾರಿಯಲ್ಲಿ ಮರ ಬಿದ್ದು, ಹಾವು ಕಚ್ಚಿ ನಿನ್ನ ಮುಗಿಸಬಾರದೇ?' ಎಂದು ಹಾರೈಸುತ್ತಿದ್ದಳು.
ಸವತಿತಾಯಿಗಿಂತ ಕಾಡು ಲೇಸು ಎಂದು ತಿಳಿದು, ನಾಗಿ ತುಂಗೆಯನ್ನು ಕರೆಯುತ್ತಾ ಹೋದಳು. ಎಲ್ಲಿ ಕರೆದರೂ, ತುಂಗೆಯಿಲ್ಲ, ಕಾಡು ಮಾತ್ರ ಮರುದನಿ ಬೀರುತ್ತಿತ್ತು. ಸಂಜೆ ಹೊತ್ತಿಗೆ ಕಪ್ಪು ಮೋಡಗಳು ನೆಲವನ್ನು ಮುಸುಕುತ್ತಿದ್ದವು.
ಗದ್ದೆಗಳನ್ನು ದಾಟಿ, ಹಳ್ಳವನ್ನು ಹಾದು, ಹಗಲಿನಿಂದ ಹೊಟ್ಟೆಗಿಲ್ಲದೆ ತತ್ತರಿಸುತ್ತಾ ಹೋದಳು. ಕಂಡ ಕರಿಯ ಕಲ್ಲು ಪೊದೆಗಳನ್ನು ತುಂಗೆಯೆಂದು ಭ್ರಮಿಸಿ, ಬಿಕ್ಕಿ ಬಿಕ್ಕಿ ಅತ್ತಳು.