Loading
ಕಾಡ ಕರಿಯ ನೆರಳಿನಲ್ಲಿ ಬೈಗುಗಪ್ಪಿನ ಮುಸುಗಿನಲ್ಲಿ ಬೇಟಿಯಾಗದ ಸಿಟ್ಟಿನಲ್ಲಿ ತಾಳ್ಮೆ ಇರಲಿಲ್ಲವನಿಗೆ ಅಚ್ಚು ಮೆಚ್ಚಿನ ಸೊಗಸುಗಾರ್ತಿ, ಹೊಸಬಳಾದ ಮKaada kariya neralinalli Baigugappina musuginalli Betiyagada sittinalli Taalme iralillavanige Acchu mechhina sogasugaarthi, hosabalada ma
ಕಾಡ ಕರಿಯ ನೆರಳಿನಲ್ಲಿ ಬೈಗುಗಪ್ಪಿನ ಮುಸುಗಿನಲ್ಲಿ ಬೇಟಿಯಾಗದ ಸಿಟ್ಟಿನಲ್ಲಿ ತಾಳ್ಮೆ ಇರಲಿಲ್ಲವನಿಗೆ ಅಚ್ಚು ಮೆಚ್ಚಿನ ಸೊಗಸುಗಾರ್ತಿ, ಹೊಸಬಳಾದ ಮಾರಿ ಹೆಂಡತಿ ಗೇನನಾದರು ಕೊಂಡು ಹೋಗುವೆನೆಂಬುದವನಿಗೆ ಹೆಮ್ಮೆಯು! ನಾಗಿ ಕಂಬಳಿ ಕೊಪ್ಪೆ ಹಾಕಿಕೊಂಡು ಬರುತಿರೆ ಹಳುವಿನಲ್ಲಿ
ದೂರ, ಮಾದನ ಕಣ್ಣೆ ಕಾಡಿನ ಜಂತು ಬಂದಂತಾಯಿತು; ಮತ್ತೆ ನೋಡಿದ. ಕರಿಯ ಕೂದಲು ಹಂದಿ ಎಂದು ನಿಶ್ಚಯಿಸುತ ಬೇಗ ಗುರಿಯಿಟೀಡು ಹೊಡೆದನು, ಗುಂಡು ಸಿಡಿಯಿತು ಹಾರಿತು! ಗುಂಡು ಢಮ್ಮೆಂದೊಡನೆ ಅವನಿಗೆ, ಏನೊ ಕೂಗು ಕೇಳಿ ಬಂತು :
"ಸತ್ತೆ ಸತ್ತೇ ಅವ್ವ ಅವ್ವಾ, ಅಪ್ಪ ಅಪ್ಪಾ" ಎಂದಿತು. ಕಾಲು ನಡುಗಿ ಕೈಯು ನಡುಗಿ ಎದೆಯು ಜೀವಗಳೆಲ್ಲ ನಡುಗಿ ಸತ್ತ ಹೆಣದಂತಾದ ಮಾದ, ಕೋವಿ ಕೆಳಗೆ ಬಿದ್ದಿತು. ಜೀವವನ್ನು ಕೈಲಿ ಹಿಡಿದು, ಹುಚ್ಚನಂತೆ ಬಿದ್ದು ಎದ್ದು ಜಂತು ಬಿದ್ದಾಜಾಗಕಾಗಿ ಮಾದ ಓಡಿ ಹೋದನು; ಎದೆಗೆ ಗುಂಡು ಬಿದ್ದ ನಾಗಿಯು ಮಾದನನ್ನು ಕಂಡ ಕೂಡಲೆ "ಸತ್ತೆನಪ್ಪಾ ಸತ್ತೆನಪ್ಪಾ, ಅಯ್ಯೋ ಅವ್ವಾ" ಎಂದಳು.
ಕಾಡಿನ ಕತ್ತಲೆಯಲ್ಲಿದ್ದಾಗ, ಅವನಿಗೆ ತಾಳ್ಮೆ ಇರಲಿಲ್ಲ. ಅವನಿಗೆ ಹೆಮ್ಮೆ ಇತ್ತು, ತನ್ನ ಹೆಂಡತಿಯನ್ನು ಕೊಂಡೊಯ್ಯುವೆನೆಂದು.
ಅವನ ಕಣ್ಣುಗಳು ಕಾಡಿನ ಪ್ರಾಣಿಯನ್ನು ಕಂಡವು. ಅವನಿಗೆ ಅದು ಕರಿಯ ಹಂದಿಯಂತೆ ತೋಚಿತು. ಅವನ ಗುಂಡು ಸಿಡಿಯಿತು.
ಆಮೇಲೆ ಅವನಿಗೆ ಕೂಗು ಕೇಳಿಸಿತು: "ಅಪ್ಪಾ, ಅಮ್ಮಾ". ಅವನ ಕಾಲು ನಡುಗಿತು, ಅವನು ಬಿದ್ದನು. ಅವನ ಹೆಂಡತಿ, ನಾಗಿಯು, ಅವನನ್ನು ನೋಡಿ "ಅಯ್ಯೋ ಅಮ್ಮಾ" ಎಂದಳು.